Posts

Showing posts from 2019

ಲೇಖನ - ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

"ಸಮಾಜ ಮಹಿಳೆಯರ ಮುಕ್ತ ಬೆಳವಣಿಗೆಯನ್ನು ಒಪ್ಪಿಕೊಳ್ಳದಿದ್ದರೆ ಆ ಸಮಾಜವನ್ನು ಪುನರ್ ರಚಿಸಬೇಕು" ಎಂದು ಆಧುನಿಕ ಯುಗದ ಪ್ರಥಮ ಮಹಿಳಾ ವೈದ್ಯೆ ಎಲಿಜಬೆತ್ ಬ್ಲಾಕ್ ವೆಲ್ ಹೇಳಿರುವುದು ಅಕ್ಷರಶಃ ಸತ್ಯವಾದುದು. ಈ ನಿಟ್ಟಿನಲ್ಲಿ ಮಹಿಳೆಯರ ಮುಕ್ತ ಬೆಳವಣಿಗೆಯನ್ನು ಒಪ್ಪದ ಸಮಾಜವನ್ನು ಬದಲಿಸುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಈಗಲೂ ಸಹ ನಡೆಯುತ್ತಿದೆ. ಮಹಿಳೆ ಏನೆಲ್ಲಾ ಸಾಧನೆ ಮಾಡಿದರು ಎಷ್ಟೇ  ಮೇಲಿನ ಸ್ಥಾನಕ್ಕೇರಿದರೂ ಒಂದಲ್ಲ ಒಂದು ರೀತಿ ಶೋಷಣೆಗೊಳಗಾಗುತ್ತಲೇ ಇದ್ದಾಳೆ. ಈ ರೀತಿ ಶೋಷಣೆಗೊಂಡ ಮಹಿಳೆಯರ ಅವಿರತ ಹೋರಾಟದಿಂದ ಜನ್ಮ ತಾಳಿ ಬಂದು ದೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಮಾರ್ಚ್ 8 ರಂದು ಈ ದಿನವನ್ನು ಆಚರಿಸಲಾಗುತ್ತಿದೆ. "ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯೇ" ಇದರ ಮೂಲ ಉದ್ದೇಶ. ಈ ಮಹಿಳಾ ಹೋರಾಟವು ತನ್ನದೇ ಆದ ಇತಿಹಾಸವನ್ನು ಹೊಂದಿದೆ.1789 ರ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಪರ್ಷಿಯನ್  ಮಹಿಳೆಯರು " ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಮತಚಲಾವಣೆಗಾಗಿ  ಮೆರವಣಿಗೆಯನ್ನು ಮಾಡಿದರು.    1848 ರಲ್ಲಿ ನಡೆದ ಸಮಾವೇಶದಲ್ಲಿ ಎಲಿಜಬೆತ್, ಕ್ಯಾಡಿ ಸ್ಟಾನ್ ಟನ್ ಮತ್ತು ಲುಕ್ರೆಷಿಯ ಮೋಟ್ ರವರು ಪುರುಷ ಮತ್ತು ಮಹಿಳೆಯರನ್ನು ಸಮಾನ ದೃಷ್ಟಿಯಲ್ಲಿ  ಕಾಣಬೇಕೆಂದು ವಾದಿಸಿದರು.   ನ್ಯೂಯಾರ್ಕನ ಬಟ್ಟೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಮಹಿಳೆಯ...