ಪುಸ್ತಕ ಪರಿಚಯ - ಕಥಾಸಂಗ್ರಹ "ಎರಡು ಮನಸು"
ತ್ರಿವೇಣಿ ಸೇರದ ದಾರಿ ಘಂಟೆ ಎರಡು ದಾಟಿದರೂ ಊಟ ಮಾಡದೆ ಗಂಡನ ದಾರಿ ಕಾಯುತ್ತಾ ಕುಳಿತ್ತಿದ್ದಳು ಕಮಲ. "ಅವರೇನು ಹೋಟೆಲಿನಲ್ಲಿ ತಿಂದಿರುತ್ತಾರೆ. ಮನೆಗೆ ಊಟಕ್ಕೆ ಬಂದರೆ ಬರುತ್ತಾರೆ ಇಲ್ಲದಿದ್ದರೆ ಇಲ್ಲ. ಅಪ್ಪ ಬದಲಾಗಿದ್ದಾರೆ. ಇಂತವರಿಗಾಗಿ ನೀನು ಊಟ ಮಾಡದೆ ಕಾಯುತ್ತಿರುವೆಯಾ?" ಮಗನ ಕೋಪದ ಮಾತುಗಳನ್ನು ಒಪ್ಪದ ಕಮಲ ಕಾಯುತ್ತಾ ಕುಳಿತಳು. ಆತ ಬಂದವನೇ ಯಾವುದನ್ನು ಗಮನಿಸದೆ ತನ್ನಷ್ಟಕ್ಕೇ ತಾನೇ ಹೋಗಿ ಮಲಗಿದನು. ಎರಡು ವರ್ಷಗಳಿಂದಲೂ ಹೀಗೆ ಯಾವಾಗಲೋ ಮನೆಗೆ ಬರುವುದು. ಮನೆಗೆ ಬೇಕಾದ ಸಾಮಾನುಗಳನ್ನು ಸರಿಯಾಗಿ ತಂದು ಕೊಡುತ್ತಿರಲಿಲ್ಲ. ಗೆಳತಿಯರಿಂದ ಸಾಲ ಪಡೆದುಕೊಂಡು, ನಂತರ ಅವರ ನಡವಳಿಕೆಯಿಂದ ಕಮಲಳಿಗೆ ಒಮ್ಮೊಮ್ಮೆ ಬೇಸರವಾಗುತ್ತಿತ್ತು. ಒಮ್ಮೆ ಬಾಲ್ಯದ ಗೆಳತಿ ಸಾವಿತ್ರಿ ಮನೆಗೆ ಬಂದು ಗಂಡನ ಬಗ್ಗೆ ಹೇಳಿದಳು. ಮೊದಲೇ ಅಲ್ಪ ಸ್ವಲ್ಪ ಮಾತು ಕಿವಿ ಮೇಲೆ ಬಿದ್ದರೂ ಕಮಲ ತಲೆ ಕೆಡಿಸಿಕೊಂಡಿರಲಿಲ್ಲ. ಗೆಳತಿಯ ಮಾತು ಕೇಳಿದಾಗಲೂ ಸಹ ನಂಬಲಿಲ್ಲ. ಆದರೆ ಗೆಳತಿಯ ಮನೆಗೆ ಹೋಗಿ ತಾನೇ ಗಂಡ ಬೇರೆ ಹುಡುಗಿ ಜೊತೆ ವಾಕಿಂಗ್ ಹೋಗುವುದನ್ನು ನೋಡಿದಳು. ಮನೆಗೆ ಬಂದು ಗಂಡನನ್ನು ಪ್ರಶ್ನಿಸಿದಳು. "ನನ್ನ ಇಷ್ಟದ ಹಾಗೇ ನಡೆಯುವೆ, ಏಕೆಂದರೆ ನಾನು ದುಡಿಯುವವನು" ಎಂದನು. "ಗಂಡ ನಡೆದ ಹಾದಿಯಲಿ ನಡೆಯಬೇಕಾದದ್ದು ಗೃಹಿಣಿ ಧರ್ಮ. ನಾನೂ ನಿಮ್ಮ ದಾರಿಯಲ್ಲಿ ನಡೆಯುವೆ" ಎಂದ ಅವಳ ಮಾತಿಗೆ "ನನ್...