ಪುಟಾಣಿ ಕಥೆ 1-10
ಪುಟಾಣಿ ಕಥೆ - ೧ ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಲು ನಿರ್ಧಾರ ಮಾಡಿ ಹೊರಟವನು , ದಾರಿಯಲ್ಲೊಬ್ಬನು , ಹೊಸದಾಗಿ ಕೊಂಡ " ಚಪ್ಪಲಿಗಳನ್ನು " ನೋಡಿ ಹಾಗೆ ನಿಂತ !! ಪುಟಾಣಿ ಕತೆ - ೨ ಆಗ ತಾನೆ ಜನಿಸಿದ ಹೆಣ್ಣುಮಗುವನ್ನು ಕಂಡು ಮುಖ ತಿರುಗಿಸಿದ ಅಪ್ಪನನ್ನು ಕಂಡ ಮಗು , " ಮಾಡದ ತಪ್ಪಿಗೆ ಶಿಕ್ಷೆಯೆ ?" ಎಂದು ಅಮ್ಮನೆಡೆಗೆ ನೋಡಿತು !! ಪುಟಾಣಿ ಕಥೆ - ೩ ವೃದ್ಧಾಶ್ರಮಕ್ಕೆ ಅಪ್ಪನನ್ನು ಬಿಟ್ಟು ಬಂದ ಮಗನನ್ನು ಅವನ ಪುಟ್ಟ ಮಗ ಕೇಳಿದ " ನಾನು ದೊಡ್ಡವನಾಗುವುದು ಯಾವಾಗ ?" ಪುಟಾಣಿ ಕಥೆ - ೪ ದೇವರಿಗೆಂದು ಬಗೆಬಗೆಯ ತಿನಿಸುಗಳನ್ನು ಮಾಡುತಿದ್ದ ಅಜ್ಜಿಯನ್ನು , ಅಲ್ಲಿಯೆ ಇದ್ದ ಮೊಮ್ಮಗು ಕೇಳಿತು " ಮಕ್ಕಳೆ ದೇವರಲ್ಲವೆ ಅಜ್ಜಿ ?" ಪುಟಾಣಿ ಕಥೆ - ೫ ಜೀವನದ ಬೇಕು , ಬೇಡ , ಆಗು ಹೋಗುಗಳ ಬಗ್ಗೆ ತಿಳಿಸುತಿದ್ದವಳಿಗೆ ನಗುತ್ತಾ ತಣ್ಣಗೆ ಹೇಳಿದಳು ಗೆಳತಿ " ನೀನೊಬ್ಬಳು ಜೊತೆಗಿದ್ದರೆ ಸಾಕು !" ಪುಟಾಣಿ ಕಥೆ - ೬ ಮಗನ ತುಂಟತನವನ್ನ ತಡೆಯಲಾಗದ ಅಮ್ಮ ಮಗನನ್ನು ಬೈಯಲು , ಮಗ ನಗುತ್ತಾ " ಅಜ್ಜಿ ನಿನ್ನನ್ನು ಬೈಯ್ದಿದ್ದರಂತೆ " ಎಂದನು!! ಪುಟಾಣಿ ಕಥೆ - ೭ ಕೈಲಾಗದು ಎಂ...