ಚುಟಕಗಳು - ಪರಿಸರ
೧
ಹರಿಯುತಿದೆ ಓಜೋನ್
ಪದರ
ಬಿಸಿಯಾಗುತಿದೆ
ಭೂತಾಯಿಯ ಉದರ
ಕರಗುತಿದೆ
ಹಿಮಾಲಯದ ಎತ್ತರ
ಇದಕೇನು ಪರಿಹಾರ? ?
೨.
ಹೆಚ್ಚುತಿದೆ ಜಾಗತಿಕ ತಾಪ
ಹಾಗೆ ಭೂತಾಯಿಯ
ಕೋಪ
ಎಲ್ಲೆಲ್ಲು
ಕಾಣುತಿದ್ದೇವೆ ಪ್ರಕೃತಿವಿಕೋಪ
ಎಚ್ಚೆತ್ತಿಕೊಳ್ಳದಿರೆ
ಮುಂದೆ ಪಡಬೇಕು ಪಶ್ಚಾತಾಪ
೩
ಹೊತ್ತಿ ಉರಿದರೆ ಈ
ಧರೆ
ಸಕಲ ಜೀವರಾಶಿಗೆಲ್ಲಿದೆ ಆಸರೆ
ಅರಿಯಬೇಕು
ವಿಜ್ಞಾನ ವಿಚಾರಧಾರೆ
ಕಡಿಮೆಗೊಳಿಸಿ
ಮಾಲಿನ್ಯಗಳ ಆದರೆ,
ಖಂಡಿತ ಉಳಿಯುವಳು ವಸುಂಧರೆ
೪.
ಹಚ್ಚುವರು
ಪಟಾಕಿಗಳ ಸರಸರ
ಮಾಲಿನ್ಯಗೊಳಿಸುವರು
ಪರಿಸರ
ಕೇಳುತಿಹುದು
ಎಲ್ಲೆಲ್ಲು ಪಟಾಕಿಯ ಸದ್ದು
ಕೆಡುಕೆಂದು
ತಿಳಿದಿದ್ದರು ಸಿಡಿಸುವರು ಮದ್ದು
ಬಲ್ಲವರು ಆಗುತಿಹರು ಬಲು ಪೆದ್ದು
ಯಾರು ಕೊಡುವರು ಇವರಿಗೆಲ್ಲ ಸರಿಯಾದ
ಮದ್ದು??
೫
ಹೇಳುವರೆಲ್ಲರು
ಇರಬೇಕು ಮನೆಗೊಂದು ಮರ
ಇದ್ದರೆ ಮನೆಮುಂದೆ ನಾನು ನೋಡಲು
ಸುಂದರ
ಪಡೆಯುವರು
ನನ್ನಿಂದ ಉಪಯೋಗ ಅಪಾರ
ಉಳಿಯುವುದು
ನನ್ನಿಂದ ಸುತ್ತಲಿನ ಪರಿಸರ
ಆದರೂ ಮಾಡುತಿರುವರು ನಮ್ಮಯ ಸಂಹಾರ
೬
೬
ಸಂಜೀವನಿಯನ್ನು ನೀಡಿ
ಮನುಜರನ್ನು ಪೋಷಿಸುತ್ತಿವೆ ಗಿಡಮರ
ಆದರೆ ಅದನ್ನು ಮರೆತ ಮನುಜ
ಮಾಡುತ್ತಿರುವನು ಅವುಗಳ ಸಂಹಾರ!!!

Comments
Post a Comment