ಚುಟಕಗಳು - ಕಾವೇರಿ





ಕಾ--ಕಾಡು ನಾಡಲೆಲ್ಲಾ ಹರಿದು
ವೇ--ವೇಗವಾಗಿ ರಭಸವಾಗಿ ಬೀಳುತ್ತ
ರಿ--ರಿಂಗಣಿಸುತಾ ಸಾಗುತಿಹಳು

೨. 
ಕರ್ನಾಟಕದಲ್ಲಿ ಜನಿಸಿಹಳು ಕಾವೇರಿ
ಹರಿಯುವಳು ವೇಗವಾಗಿಲ್ಲಿ ವಯ್ಯಾರಿ
ಉಳಿಸಿಕೊಳ್ಳಲವಳ ಇಲ್ಲಿ ಮಾಡಿಲ್ಲ ತಯಾರಿ
ಬದಲಾಗಿ ಪ್ರತಿಭಟನೆಗಳು ನಡೆಯುತ್ತಿವೆ 'ಕಾವು-ಏರಿ'!

ಕಾವೇರಿಗಾಗಿ ಕಾವೇರುತಿದೆ ಪ್ರತಿಭಟನೆ
ಎಲ್ಲೆಲ್ಲು ನಡೆಯುತಿದೆ ಅಹಿತಕರ ಘಟನೆ
ಹೆಚ್ಚುತಿದೆ ಕನ್ನಡಿಗರಲ್ಲಿ ಅಸಹನೆ
ತೆಗೆದುಕೊಳ್ಳದೆ ಯಾವ ನಿರ್ಧಾರ ಒಡನೆ
ಮಾಡುತಿಹರು ಪರಸ್ಪರ ಆಪಾದನೆ
ಇದಕ್ಕೆಂದಿಗೆ ಸಿಗುವುದು ಕೊನೆ

೪. 
ಕಾವೇರಿ ನೀರು ಬೇಕೆನ್ನುತಿದೆ ತಮಿಳುನಾಡು
ಅದಕ್ಕಾಗಿ ಹೊತ್ತಿ ಉರಿಯುತಿದೆ ಕರುನಾಡು
ನೋಡಲಾಗದು ಸಾಮಾನ್ಯ ಜನರ ಪಾಡು
ಕಾವೇರಿತಾಯೇ ನೀ ಎಲ್ಲರ ಕಾಪಾಡು

೫. 
ಸುಪ್ರೀಂಕೋರ್ಟ್ ನೀಡಲು ಆದೇಶ
ಹೆಚ್ಚಾಯಿತು ಜನರ ಆಕ್ರೋಶ
ಸರ್ಕಾರ ಎಣಿಸುತ್ತಿದೆ ಮೀನಮೇಷ
ಆಗುತಿದೆ ರಾಷ್ರ್ಟದ ಸಂಪತ್ತಿನ ನಾಶ



Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು