ಪುಸ್ತಕ ಪರಿಚಯ - ಟೊಳ್ಳುಗಟ್ಟಿ
" ನನ್ನ ಮಟ್ಟಿಗೆ ನನಗೆ ಹಾಸ್ಯದ ಮುಖವಾಡವೇ ಬೇಕು ಎನಿಸುತ್ತದೆ. ನನಗೆ ಅದು ಸಹಜ ನನಗೊಂದು ವಕ್ರದೃಷ್ಟಿಯಿದೆ ಐರಾವತಕ್ಕೂ ಅಡಿಜಾರುತ್ತೇ...ಹಾಸ್ಯದೃಷ್ಟಿಯ ಭೂತಕನ್ನಡಿಯಲ್ಲಿ ಜನರು ನಿಸ್ಸಂಕೋಚವಾಗಿ ತಮ್ಮನ್ನು ತಾವೇ ನೋಡಿಕೊಳ್ಳಲು ಬಹಳ ಸುಲಭ. ತಮ್ಮನ್ನು ನೋಡಿ ತಾವೇ ನಗುತ್ತಾರೆ. ಹಾಸ್ಯದ ಗಮ್ಯ ಉಲ್ಲಾಸ , ರೋಗಿಗೆ ಪಥ್ಯವಿದ್ದಂತೆ. ಜನಕ್ಕೆ ಮನಸ್ಸು ಕುಗ್ಗಿದಾಗ ಹಾಸ್ಯ ಅದನ್ನು ಅರಳಿಸುತ್ತದೆ. ಲೋಕ ಜಡವಾದಾಗ ಹಾಸ್ಯ ಅದನ್ನು ಚೇತರಿಸುತ್ತದೆ.... ಹಾಸ್ಯ ನಿರ್ಮಲವಾಗದಿದ್ದರೆ ಹಾಸ್ಯ ಅಪಹಾಸ್ಯವಾಗಿ ವಿಘಾತವಾಗಿ ಪರಿಣಮಿಸುತ್ತದೆ. ಶಸ್ತ್ರವೈದ್ಯನ ಶಸ್ತ್ರದಂತೆ ಹಾಸ್ಯ ಅನನ್ಯ ಚಿತ್ರವಾಗಿರಬೇಕು." ಹೀಗೆಂದವರು ಪ್ರಸಿದ್ಧ "ಪ್ರಹಸನ ಪಿತಾಮಹ" ಟಿ.ಪಿ.ಕೈಲಾಸಂ ರವರು. ಇವರು ಅಂದಿನ ಸಮಾಜದ ರೀತಿನೀತಿಗಳನ್ನು ತಿಳಿಸಲೋಸಗ ಹೊಸ ಪ್ರಯತ್ನವನ್ನು ಮಾಡಿದರು.ಅದುವೇ ಇಂಗ್ಲಿಷ್ ಭಾಷೆ ಮಿಶ್ರಿತ ವಿಶಿಷ್ಟ ಶೈಲಿಯ ನಾಟಕಗಳು. ಅವುಗಳಲ್ಲಿ " ಟೊಳ್ಳುಗಟ್ಟಿ "ಎನ್ನುವ ನಾಟಕವನ್ನು ನಿಮಗೆ ಪರಿಚಯಿಸುತ್ತೇನೆ. ಇದರಲ್ಲಿ ಒಬ್ಬೊಬ್ಬರ ಮೂಲಕ ಒಂದೊಂದು ಸಂದೇಶವನ್ನು ನೀಡಿದ್ದಾರೆ. ತಂದೆ ಹಿರಿಯಣ್ಣ. ತಾಯಿ ಭಾಗೀರಥಮ್ಮ , ಹಿರಿಮಗ ಪುಟ್ಟು ಜಾಣ ಓದಿನಲ್ಲಿ ಮುಂದು , ಇನ್ನೊಬ್ಬ ಮಾಧವ ಓದಿನಲ್ಲಿ ಹಿಂದಾದರೂ ಎಲ್ಲರಿಗೂ ಸಹಾಯಹಸ್ತ ನೀಡುತ್ತಿದ್ದ. ತಂಗಿ ನಾಗಮ್ಮ ವಿಧವೆ. ಇಬ್ಬರು ಸೊಸೆಯಂದಿರು ಪಾತು ಮತ್ತು ಸಾತು. ಹಿ...

Comments
Post a Comment