ಚುಟಕಗಳು - ಮೌನ ಮಾತು
೧
ಮಾತು ಅದುವೆ
ರವಿಕಿರಣ
ಮೌನವಾದರೊ
ಶಶಿಕಿರಣ.
೨
ಮೌನ ಮಾತನಾಡುವುದು ಕಷ್ಟ
ಮಾತು ಮೌನವಾದರೂ ಕಷ್ಟ
ಮೌನ ಮಾತುಗಳೆರಡರ ಮಿಳಿತ
ಇರುವುದದರಲ್ಲೇ ಗೆಳೆತನದ ಸೆಳೆತ
೩
ಮೌನಿಯೆಂದು ತಿಳಿದು ಬಳಿ ಬಂದೆ ಆಡುತ ಮಾತು
ಅವೆಲ್ಲವೂ ಒಂದೊಂದು ಸುಂದರ ಮುತ್ತು
ಅದ ಸದಾ ಕೇಳಬೇಕೆನ್ನುವೆ ನಿನಗೂ ಗೊತ್ತು
ನಿನ್ನ ನೆನಪು ಕಾಡುತಿದೆ ಈ ಹೊತ್ತು
೪
ಮೌನವೇ ಎಲ್ಲ ಪ್ರಶ್ನೆಗಳಿಗೆ
ಉತ್ತರವಾಗಲು ಸಾಧ್ಯವೇ?
ತೂಕ ತಪ್ಪಿದ ಮಾತುಗಳಿಗಿಂತ
ಮೌನವೇ ಚೆನ್ನಲ್ಲವೇ?
Comments
Post a Comment