ಕವನ - ಮರಳಿ ಬಂದಿದೆ ಯುಗಾದಿ


ಮರಳಿ ಬಂದಿದೆ ಯುಗಾದಿ
ತಂದಿದೆ ಸಂತಸವ ಮನದಿ
ಮಾಡುವಿರೆಲ್ಲಾ ಎಣ್ಣೆ ಸ್ನಾನ
ಹಗುರವಾಗುವುದು ಮೈಮನ
ತಿನ್ನುವಿರೆಲ್ಲಾ ಬೇವು ಬೆಲ್ಲ
ಹರುಷವಿರಲಿ ಜೀವನವೆಲ್ಲ
ಕಟ್ಟುವಿರಿ ಬಾಗಿಲಿಗೆ ಹಸಿರುತೋರಣ
ಬಾಳೆಲ್ಲಾ ತುಂಬಿರಲಿ ಸಿಹಿಯ ಹೂರಣ
ವಸಂತ ಋತುವಿನ ಆಗಮನ
ಹಸುರಿನಿಂದ ಕಂಗೊಳಿಸಿತು ಹೂಬನ
ತಂಪಾಯಿತು ನೋಡಿ ಎಲ್ಲರ ಕಣ್ಮನ
ಕೇಳಲು ಎಲ್ಲೆಲ್ಲು ಕೋಗಿಲೆಯ  ಗಾನ
ಮರೆಸುವುದು ಎಲ್ಲರ ಮೈಮನ

Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು