ಚುಟಕಗಳು

೧. 
--ಕಲ್ಪನೆ ವಾಸ್ತವ
ವಿ--ವಿಚಾರಗಳೆರಡನ್ನು

ತೆ--ತೆರೆದು ತೋರಿಸುವ ಸಾಲುಗಳು

ಬರೆಯಲೊಂದು ಕವಿತೆ
ಮನದಲ್ಲಿ ಹಲವಾರು ಚಿಂತೆ
ಜಗವೊಂದು ಚಿಂತೆಗಳ ಸಂತೆ
ಇರಬೇಕು ಎಲ್ಲವನು ಮರೆತಂತೆ

ಎಷ್ಟೂ ಕೆಟ್ಟದು  ಸಿಟ್ಟು

ಬಂದರು ಇದನ್ನು ದೂರ ಅಟ್ಟು
ನಿಲ್ಲು ನೀ ಅದನ್ನು ಮೆಟ್ಟು
ಇಲ್ಲದಿರೆ ಆಗುವುದು ಹಾನಿ ದುಪ್ಪಟ್ಟು

ಝಣಝಣ ಕುರುಡು ಕಾಂಚಾಣ
ಹಲವರಲ್ಲಿಹುದು ಇದು ಮಣಮಣ
ಅದಕ್ಕಾಗಿ ನಡೆವುದು  ಪ್ರಾಣಹರಣ
ಅರಿತು ನಡೆಯುವವನೆ ಬಲು ಜಾಣ

ಬಲ್ಲವರು ಹೇಳಿರುವರು ಮಾತು ಮುತ್ತು
ಅರಿತು ಆಡಿದರೆ ಅದೇ ಹಲವರ ಸಂಪತ್ತು
ಮರೆತು ಜಾರಿಸಿದರೆ ತರುವುದು ಆಪತ್ತು


Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು