ಪುಟಾಣಿ ಕಥೆ 51 -60
ಪುಟಾಣಿ ಕಥೆ - ೫೧
"ಏನ್ ಮಹಾ ಓದ್ಬಿಟ್ಟಿದ್ದೀಯ ಒಂದು ಡಿಗ್ರಿನೂ ಪಾಸ್ ಮಾಡಿಲ್ಲ. ಇನ್ನು L.K.G ಮಗನಿಗೇನು ಪಾಠ
ಹೇಳಿಕೊಡ್ತೀಯ?” ಎಂದು ಯಾವಾಗಲೂ
ಮಡದಿಯನ್ನು ಮೂದಲಿಸುತ್ತಿದ್ದ ಆತ.
ಮಗನ ಏಳನೇ ತರಗತಿಯ ಮಾರ್ಕ್ಸ್ ಕಾರ್ಡ್ ಜೊತೆ
ಮಡದಿಯ ಮಾರ್ಕ್ಸ್ ಕಾರ್ಡ್ ನೋಡಿದಾಗಲೆ ತಿಳಿಯಿತು ಮಡದಿ ಡಬ್ಬಲ್ ಡಿಗ್ರಿ ಪಾಸ್ ಮಾಡಿದ್ದಾಳೆಂದು!!
ಪುಟಾಣಿ ಕಥೆ - ೫೨
ಓದು ಮುಗಿದು ಪಟ್ಟಣದಲ್ಲಿ ಕೆಲಸಕ್ಕೆ ಸೇರಿದ ಮಗ ತಂದೆತಾಯಿಯನ್ನು "ಎಲ್ಲರು ಒಟ್ಟಿಗೆ ಇರೋಣ ಬನ್ನಿ" ಎಂದು ಕರೆದನು. ಅಪ್ಪ ನಗುತ್ತ ಕೇಳಿದ "ಹರುಷದ ಕೂಳಿಗೋಸ್ಕರ ವರುಷದ ಕೂಳನ್ನು ಬಿಡಲಾ ಮಗನೆ!!"
ಪುಟಾಣಿ ಕಥೆ - ೫೩
ಗಾಡಿಯಿಂದ ಬಿದ್ದು ಮನೆಗೆ ಬಂದವ ಕೋಪದಿಂದ "ಬೆಳಿಗ್ಗೆ ನಿನ್ನ ಮುಖ ನೋಡಿದ್ದರಿಂದ ಬಿದ್ದೆ" ಎಂದನು ಮಡದಿಗೆ. ಅದಕ್ಕವಳು "ನೆನ್ನೆನೂ ನನ್ನ ಮುಖವನ್ನಲ್ಲವೆ ನೋಡಿದ್ದು. ಮತ್ತೆ ಲಾಟರಿ ಹಣ ಬಂತಲ್ಲ" ಎಂದಳು!
ಪುಟಾಣಿ ಕಥೆ - ೫೪
ಈ ವರ್ಷವೂ ಗೆದ್ದೇ ಗೆಲ್ಲುವೆ
ಎಂದು ಬೀಗುತ್ತಿದ್ದ ಆತ ಸೋತು,
ಜನರನ್ನು ಕೇಳಿದ "ಯಾಕೆ
ಹೀಗೆ?" ಎಂದು. "ನೀ ನಮಗಿದ್ದರೆ, ನಾವು
ನಿನಗೆ ಗೊತ್ತಿಲ್ಲವೆ ನಿನಗೆ" ಎಂದರವರು!!
ಪುಟಾಣಿ ಕಥೆ - ೫೫
ಮರೆವು ನೆನಪುಗಳ ನಡುವೆ ಚರ್ಚೆ
ನಡೆಯುತ್ತಿತ್ತು."ಎಲ್ಲವು ಕಾಲಕಾಲಕ್ಕೆ ನೆನಪಿನಲ್ಲಿದ್ದರೆ
ಮಾತ್ರ ಜೀವನ ಸುಗಮ" ಎಂದು
ನೆನಪು ಹೇಳಿದರೆ "ನಾನಿಲ್ಲದಿದ್ದರೆ ಸಂತೋಷ
ಜೀವನವೆಲ್ಲಿ?" ಮರೆವು ಕೇಳಿತು."
ನೆನಪು,
ಮರೆವು ಎರಡೂ ಬೇಕು ಜೀವನಕ್ಕೆ" ಎಂದವು
ಅಳು ಮತ್ತು ನಗು ಒಟ್ಟಾಗಿ!!!
ಪುಟಾಣಿ ಕಥೆ - ೫೬
ಮಗನ ಮಾತಿನಿಂದ ನೊಂದ ತಾಯಿ
ಕಣ್ಣೀರಿಡುತ್ತಿದ್ದಳು. ಆಟವಾಡುತ್ತಿದ್ದ ಮೊಮ್ಮಗ "ಅಜ್ಜಿ ಏಕೆ ಅಳುತ್ತಿರುವೆ?" ಎಂದನು. "ಏನಿಲ್ಲ
ಕಣ್ಣಿಗೆ ಕಸ
ಬಿದ್ದಿದೆ" ಎಂದು ನಕ್ಕಾಗ "ಸುಳ್ಳನ್ನು
ಹೇಳಬಾರದು" ಎಂದು ನಿನಗೆ ನಿನ್ನಮ್ಮ
ಹೇಳಿಕೊಟ್ಟಿಲ್ಲವೇ??" ಎಂದನಾ ಪುಟ್ಟ ಮೊಮ್ಮಗ!!!
ಪುಟಾಣಿ ಕಥೆ - ೫೭
ಚಿಂತಿಸುತ್ತಾ
ಕುಳಿತಿದ್ದ ತಾಯಿಯನ್ನು ನೋಡಿದ ಮಗಳು
ಕೇಳಿದಳು "ಬದಲಾವಣೆ ಜಗದ ನಿಯಮ, ನಿನ್ನದಲ್ಲದ ತಪ್ಪಿಗೆ ಹೀಗೇಕೆ ಮೌನವಾಗಿರುವೆ??!!"
ಪುಟಾಣಿ ಕಥೆ - ೫೮
"ಪರಿಣಾಮ
ಚೆನ್ನಾಗಿರುವುದಿಲ್ಲ" ನೋಡು ಎಂದು ಕುಡಿದು
ಬಂದ ಗಂಡ, ಪ್ರಶ್ನಿಸಿದ
ಮಡದಿಗೆ ಹೇಳಿದ.
"ಹೌದು, ನಿಮಗೆ" ಎಂದು ಹೇಳಿ ರೋಸಿ
ಹೋಗಿದ್ದ ಮಡದಿ ಸೂಟ್
ಕೇಸ್ ನೊಂದಿಗೆ ಮನೆಯಿಂದ ಹೊರಟಳು!!!
ಪುಟಾಣಿ ಕಥೆ - ೫೯
'ನಾನೇನು ತಪ್ಪು ಮಾಡಿಲ್ಲ ನನ್ನನ್ನು ನಂಬಿ
ಅಮ್ಮ' ಎಂದು ಎಷ್ಟು ಹೇಳಿದರೂ ನಂಬದ ಅಮ್ಮ
"ದೇವರಾಣೆಗೂ ನಿಜ ಹೇಳು" ಎಂದಾಗ, "ಕಣ್ಣೆದುರುಗಿನ
ಸತ್ಯವನ್ನು ಬಿಟ್ಟು ಕಾಣದಿರುವುದನ್ನು ಹೇಗೆ
ನಂಬುವೆಯಮ್ಮ" ಕೇಳಿದಳು ಮಗಳು!!!
ಪುಟಾಣಿ ಕಥೆ - ೬೦
ಸ್ಕೂಟಿ ಓಡಿಸಲು ಭಯ ಪಡುತ್ತಿದ್ದ
ಟೀಚರ್ ನನ್ನು ನೋಡಿದ ಮಕ್ಕಳು "ಯಾಕೆ ಮೇಡಂ ನೀವೆ ಹೇಳುತ್ತಿದ್ದ 'ಮನಸ್ಸಿದ್ದರೆ ಮಾರ್ಗ' ಎನ್ನುವದನ್ನು ಮರೆತಿರಾ??" ಎಂದರು ಒಕ್ಕೊರಲಿನಿಂದ!!
Comments
Post a Comment