ಹಾಡು - ಮಹಿಳೆಯು ಮಾಡಿದ ಸಾಧನೆ
ಏನ ಹೇಳಲಿ ಗೆಳತಿ ಮಹಿಳೆಯು ಮಾಡಿದ ಸಾಧನೆಯ
ಎಲ್ಲಾ ಕ್ಷೇತ್ರದಲ್ಲೂ ಇವಳು ಪ್ರಗತಿಯ ತೋರಿಹಳು
ಜನರಿಗೆ ಮಾದರಿಯಾಗಿಹಳು(ಏನ)
ಅರಸನ ವರಿಸಿದರೂ ಕೇಶಾಂಬರ ಧರಿಸಿದಳು
ಈಶನ ಒಲುಮೆಗೆ ವೈರಾಗ್ಯ ತಾಳುತ್ತ ಅಕ್ಕ ಎನಿಸಿದಳು
ಮಹದೇವಿ ಅಕ್ಕ ಎನಿಸಿದಳು(ಏನ)
ನೊಂದ ಜನರನ್ನು ಸಾಂತ್ವನ ಮಾಡಿದಳು
ನಿರ್ಮಲ ಮನಸ್ಸಿಂದ ಸೇವೆಯ ಮಾಡುತ್ತ ಮಾತೆ ಎನಿಸಿದಳು
ಥೆರೇಸಾ ಮಾತೆ ಎನಿಸಿದಳು(ಏನ)
ಬಾಹ್ಯಾಕಾಶಕ್ಕೆ ನೌಕೆಯ ಹಾರಿಸಿ ನಲಿದಿಹಳು
ಬಾನೆತ್ತರಕ್ಕೆ ಕೀರ್ತಿಯ ಬಾವುಟ ಹಾರಿಸಿ ಮೆರೆದಿಹಳು
ಭಾಮಿನಿ ಹಾರಿಸಿ ಮೆರೆದಿಹಳು(ಏನ)
ಹೆಣ್ಣು ಹೆಣ್ಣೆಂದು ನಮ್ಮಲ್ಲಿ ಕೀಳರಿಮೆ ಬೇಡ
ಹೆಣ್ಣು ತಾನೆ ಸಂಸಾರದ ಕಣ್ಣು ಎಂಬುದು ತಿಳಿಯಬೇಕು
ತಿಳಿದು ಸಂತಸ ಪಡಬೇಕು(ಏನ)
ಹೆಣ್ಣು ಗಂಡೆಂಬ ಭೇದ ಭಾವವ ಬಿಡಬೇಕು
ಗಂಡು ಹೆಣ್ಣು ಸಮಾನರೆಂಬುದ ಎಲ್ಲರೂ ತಿಳಿಯಬೇಕು
ಮಹಿಳೆಯ ಶೋಷಣೆ ನಿಲಬೇಕು(ಏನ)
Comments
Post a Comment