ಹಾಡು - ಕನ್ನಡ ನಮ್ಮಯ ಉಸಿರಾಗಿರಲಿ
ಕನ್ನಡ ನಮ್ಮಯ ಉಸಿರಾಗಿರಲಿ
ಕರುನಾಡು ಎಂದಿಗೂ ಹಸಿರಾಗಿರಲಿ।।
ಕಾವೇರಿ ನದಿಯ ಜುಳುಜುಳು ನಾದ
ತರುವುದು ಮನಸಿಗೆ ಆಹ್ಲಾದ
ಶ್ರೀಗಂಧ ಬೆಳೆಯುವ
ನಮ್ಮಯ ನಾಡು
ಶಿಲೆಯಲಿ ಕಲೆಗಳು ಅರಳಿದ ಬೀಡು(೧)
ಬೇಂದ್ರೆ ಕಾರಂತ ಕುವೆಂಪು...
ಕನ್ನಡದಲಿ
ಎಂದು ಸವಿನೆನಪು
ಓಬವ್ವ ಚೆನ್ನಮ್ಮ ಹುಟ್ಟಿದ ನಾಡು
ಅದುವೆ ಹೆಮ್ಮೆಯ ಕರುನಾಡು(೨)
Comments
Post a Comment