ಪುಟಾಣಿ ಕಥೆ 31-40
ಪುಟಾಣಿ ಕಥೆ - ೩೧
ಪುಟಾಣಿ ಕಥೆ - ೩೧
ಪುಟಾಣಿ ಕಥೆ - ೩೨
ಪುಟಾಣಿ ಕಥೆ - ೩೩
ಪುಟಾಣಿ ಕಥೆ - ೩೪
ಪುಟಾಣಿ ಕಥೆ - ೩೫
ಪುಟಾಣಿ ಕಥೆ - ೩೬
ಪುಟಾಣಿ ಕಥೆ - ೩೭
ಪುಟಾಣಿ ಕಥೆ - ೩೮
ಪುಟಾಣಿ ಕಥೆ - ೩೯
ಪಟ್ಟಣದಲ್ಲಿದ್ದ ಗೆಳೆಯನನ್ನು ನೋಡಲು ಹಳ್ಳಿಯಿಂದ ಬಂದ ಗೆಳೆಯನಿಗೆ ಹೇಳಿದ ಆತ "ಏನು ಮಾಡಲು ಸಮಯವೇ ಸಾಲುತ್ತಿಲ್ಲ."
"ಹೌದಪ್ಪ ನಿಮ್ಮ ಹೆಚ್ಚಿನ ಸಮಯವನ್ನೆಲ್ಲಾ ಟ್ರ್ಯಾಫಿಕ್ ನಲ್ಲೇ ಕಳೆಯುವಿರಿ, ಏನು ಮಾಡಲು ಸಾಧ್ಯ?? "
ಪುಟಾಣಿ ಕಥೆ - ೪೦
"ಪ್ರೀತಿಸಿ ಮದುವೆಯಾಗಿ "ಈಗ ಕುಡುಕ ಗಂಡನ ಜೊತೆ ಇರಲಾರದೆ ತಪ್ಪು ಮಾಡಿದೆ” ಎಂದು ಅಳುತ್ತಾ ಕುಳಿತ್ತಿದ್ದವಳು, ಮಗುವೊಂದು ನಡೆಯುವಾಗ ಬಿದ್ದು ಮತ್ತೆ ಎದ್ದು ನಡೆಯುವುದನ್ನು ಕಂಡು ತಾನು ನಿರ್ಧರಿಸಿದಳು "ಗಂಡನ ಕುಡಿತವನ್ನು ಬಿಡಿಸಬೇಕೆಂದು!!"
ಪುಟಾಣಿ ಕಥೆ - ೩೧
"ಹಿರಿಯರನ್ನು ಏಕೆ ರೇಗಿಕೊಂಡೆ, ನೀನು ನಡೆದುಕೊಂಡು ರೀತಿ ಸರೀನಾ?" ಮಗಳನ್ನು ಪ್ರಶ್ನಿಸಿದಳು ಅಮ್ಮ.
"ನೀತಿ
ಬಿಟ್ಟು ನಡೆದ ಅವರಿಗೆ ಗೌರವ ಕೊಡಬೇಕಾ? ನೀನೆ ಹೇಳು" ಎಂದಳು ಮಗಳು.
ಪುಟಾಣಿ ಕಥೆ - ೩೨
ಪದೇ ಪದೇ ತುಳಿತಕ್ಕೆ ಒಳಗಾದ ಅವಳು ದಾರಿಕಾಣದೆ ಕುಳಿತ್ತಿದ್ದಳು.ಮಗಳು "ಉಳಿವಿಗಾಗಿ ಹೋರಾಟ ಮಾಡುವುದು ಅನಿವಾರ್ಯ" ಎಂದು ಓದುತ್ತಿದ್ದದ್ದನ್ನು ಕೇಳಿ
ಎದ್ದು ನಿಂತಳು!!!
ಪುಟಾಣಿ ಕಥೆ - ೩೩
"ಬಸವ ತತ್ವಗಳು " ಉಪನ್ಯಾಸವನ್ನು ತುಂಬಾ ಮೆಚ್ಚಿಕೊಂಡ ವ್ಯಕ್ತಿ ಊಟಕ್ಕೆ ತಮ್ಮ ಪಕ್ಕದಲ್ಲಿ ಕುಳಿತುಕೊಂಡವರನ್ನು "ನಿಮ್ಮದು ಯಾವ ಜಾತಿ?"ಎಂದು ಪ್ರಶ್ನಿಸಿದರು!!
ಪುಟಾಣಿ ಕಥೆ - ೩೪
ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದ ಆಕೆ, ಗೆಳತಿಗೆ ಹೇಳಿದಳು "ಪ್ರೀತಿಗೆ ಬೆಲೆ ಕಟ್ಟಲಾಗದು." ಆದರೆ
ಬೆಲೆ ಕಟ್ಟಿಯೇ ಬಿಟ್ಟಳು ಆಕೆಯ ದತ್ತು ಮಗಳು!!
ಪುಟಾಣಿ ಕಥೆ - ೩೫
ಗಂಡ ಮತ್ತು ಮೈದುನಂದಿರ ದರ್ಪ, ದೌರ್ಜನ್ಯದಿಂದ ಬೇಸರಗೊಂಡು
ಸಾಯಲು ನಿರ್ಧರಿಸಿದಳು ಅವಳು. "ನಿನ್ನ ಮಗಳ ಗತಿಯೇನು? ಅವಳೂ ನಿನ್ನಂತಾಗಬೇಕೆ?" ಪ್ರಶ್ನಿಸಿದಳು ಗೆಳತಿ. ತನ್ನ ನಿಲುವನ್ನು ಬದಲಿಸಿಕೊಂಡ ಆಕೆ ಪ್ರತಿಭಟಿಸಲು ತಯಾರಾದಳು!!
ಪುಟಾಣಿ ಕಥೆ - ೩೬
ಅವಳು "ಭಾವನೆಗಳಿಲ್ಲದ ಕಲ್ಲುಬಂಡೆ" ಎಂದೇ ತಿಳಿದಿದ್ದರು ಎಲ್ಲರು. ಆದರೆ "ಕಲ್ಲುಬಂಡೆಗಳ ನಡುವೆಯೇ ಜೀವಸೆಲೆ ಇರುವುದು" ಎಂಬುವುದನ್ನು ಅವರೇನು ಬಲ್ಲರು??!!
ಪುಟಾಣಿ ಕಥೆ - ೩೭
ಬೈಕ್ ಓಡಿಸುತ್ತಾ" ಸಂಚಾರಿ ನಿಯಮವನ್ನು" ಉಲ್ಲಂಘಿಸಿ ರಸ್ತೆಯನ್ನು ದಾಟಿದ ಆತ. ಹಿಂದಿನಿಂದ ಬಂದ ಪಕ್ಕದ ಮನೆಯ
ಹುಡುಗ" ಏನ್ ಪೋಲೀಸ್ ಅಂಕಲ್ ನೀವು ಮಾಡಿದ್ದು ಸರೀನಾ??!!" ಎಂದು ಕೇಳಿದನು.
ಪುಟಾಣಿ ಕಥೆ - ೩೮
"ಮನೆ ಮರ್ಯಾದೆ" ಎಂದು ಮನೆಯವರ ಮೇಲೆಲ್ಲಾ ಜೋರು ಮಾಡುತ್ತಿದ್ದ ಆತ. ಸಂಜೆಯ ಮೇಲೆ ಬಾರಿನಿಂದ ತೂರಾಡುತ್ತ ಬಂದವನೆ ಮನೆ ಮುಂದೆ ಗಲಾಟೆ ಮಾಡುತ್ತಿದ್ದನಾತ!!!"
ಪುಟಾಣಿ ಕಥೆ - ೩೯
ಪಟ್ಟಣದಲ್ಲಿದ್ದ ಗೆಳೆಯನನ್ನು ನೋಡಲು ಹಳ್ಳಿಯಿಂದ ಬಂದ ಗೆಳೆಯನಿಗೆ ಹೇಳಿದ ಆತ "ಏನು ಮಾಡಲು ಸಮಯವೇ ಸಾಲುತ್ತಿಲ್ಲ."
"ಹೌದಪ್ಪ ನಿಮ್ಮ ಹೆಚ್ಚಿನ ಸಮಯವನ್ನೆಲ್ಲಾ ಟ್ರ್ಯಾಫಿಕ್ ನಲ್ಲೇ ಕಳೆಯುವಿರಿ, ಏನು ಮಾಡಲು ಸಾಧ್ಯ?? "
ಪುಟಾಣಿ ಕಥೆ - ೪೦
ದೂರದ ಪಟ್ಟಣದಲ್ಲಿ ಓದುತ್ತಿದ್ದ ಮಗನನ್ನು ನೋಡಲು ಬಂದ ತಂದೆ, ತಾಯಿ ಮಗ ಸಣ್ಣಗಾಗಿರುವುದನ್ನು ಕಂಡು "ಯಾಕ್ಹೀಗಾಗಿರುವೆ?" ಎಂದು ಕೇಳಿದರು.
"ನಿಮಗೆ ಬೇಕಾಗಿರುವುದು ನಿಮ್ಮ ಪ್ರತಿಷ್ಠೆಯೆ ವಿನಃ ನಾನಲ್ಲವಲ್ಲ" ಎಂದನವನು!!"
Comments
Post a Comment