ಚುಟಕಗಳು - ಸ್ನೇಹ ಸಂಬಂಧ
೧.
ನಿನ್ನ ಮೌನ ನನ್ನನ್ನು ಕಾಡುತಿದೆ
ಆದರೂ ನಡುವೆ ಸ್ನೇಹ ನಗುತಿದೆ
ಮೌನ ಕರಗಿ ಮಾತು ಬೆಳೆದು
ಬೆಳೆವುದೀ ಅನುಬಂಧ ಎಂದೆಂದು
೨
ಓ ನನ್ನ ಗೆಳತಿ
ತುಂಬುತಿರುವೆ ನನ್ನಲ್ಲಿ ಸ್ಪೂರ್ತಿ
ಇರಲಿ ಹೀಗೆ ನಡುವಿನ ಪ್ರೀತಿ
೩
ನೀನೊಂದು ವಿಶಾಲವಾದ ಪ್ರೀತಿಯ ಸಾಗರ
ಅದು ಮನ ಸೆಳಯುತಿದೆ ಎಲ್ಲರ
ಬರುವವರೆಷ್ಟೊ ಅದರ ಹತ್ತಿರ
ಇಳಿಯುವರಿಗಷ್ಟೇ ತಿಳಿಯುವುದು ಅದೆಷ್ಟು ಮಧುರ
೪
ಸ್ಹೇಹವೆಂಬುದು ಒಂದು ಕವನ
ಎರಡು ಮನಸುಗಳ
ಮಿಲನ
ತರುವುದು ನವ
ಸಂಚಲನ
ಮಾಡುವುದು ನೆನೆಪುಗಳ ಸಿಂಚನ
೫
ಬರಡು ನೆಲದಲ್ಲಿ
ಗಿಡ ಚಿಗುರಿದಂತೆ
ಕಲ್ಲು ಹೃದಯದಲ್ಲಿ
ಭಾವನೆ ಮೂಡಿತು
ಗಿಡದಿ
ಹೂ ಅರಳಿ
ಚೆಲುವು ಸೂಸುವಂತೆ
ಮನದಿ ಸ್ಹೇಹ ಚಿಗುರಿ
ಪರಿಮಳವ ಬೀರಿತು

Comments
Post a Comment