ಚುಟಕಗಳು - ಗೆಳೆತನ


೧. ಸ್ನೇಹದ ನಗೆ ಬೀರುತ ಬಂದಳು ಗೆಳತಿ
ಬೆಳಗಿಸುತ್ತಾ ಅರಿವಿನ  ಜ್ಯೋತಿ
ಮತ್ತೆ ಚಿಗುರಿಸಿ ಬರೆಯುವ ರೀತಿ
ಇರಲಿ ಹೀಗೆ ನಮ್ಮ ನಡುವಿನ ಪ್ರೀತಿ

೨. ಬಲು ಅಪರೂಪ ನಮ್ ಜೋಡಿ
ಎಂತಹ  ವಿಶೇಷ ನೀವ್  ನೋಡಿ
ಉತ್ತರ-ದಕ್ಷಿಣಗಳು ನಾವ್ ಕೂಡಿ
ಮಾಡಿದೆವಿಲ್ಲಿ ಎಂತಹ  ಮೋಡಿ?

೩. ಇದ್ದರು ಸ್ವಭಾವದ ಅಂತರ
ಆದರು ಸ್ನೇಹ  ಎಷ್ಟು ಸುಂದರ
ಇರಲಿ ಹೀಗೆ ಇದು ನಿರಂತರ

೪. ನಿನ್ನ ಸ್ನೇಹದ ಕಡಲಲ್ಲಿ ಇರುವುದೆಷ್ಟೊ ಮುತ್ತು
ಅದರಲ್ಲಿ ನಾ ಕಲ್ಲೆಂದು ಗೊತ್ತು
ಆದರು ಅದು ಕಡಲದೆ ಸೊತ್ತು
ಅದು ನಿನ್ನೊಂದಿಗೆ ಇರುವುದು ಯಾವತ್ತು     

೫. ಬೆಳೆಯಲು ಒಳ್ಳೆಯ ಗೆಳೆತನ
ತಂದಿತು ನಮ್ಮಲ್ಲಿ ಹೊಸತನ
ಇರಲು ಇದು ನಿತ್ಯ ನೂತನ
ಮಾಡಬೇಕು ಅದನ್ನು ಜತನ
   - ವಿಜಯಲಕ್ಷ್ಮಿ ಎಂ ಎಸ್ 




Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು