ಪುಟಾಣಿ ಕಥೆ 11-20
ಪುಟಾಣಿ ಕಥೆ ೧೧
ಪುಣ್ಯಾರ್ಜನೆಗಾಗಿ
ತೀರ್ಥಕ್ಷೇತ್ರಗಳಿಗೆ ಹೊರಟ ಮಗ,ಮನೆಯಲ್ಲಿ
ಅನಾರೋಗ್ಯಪೀಡಿತ ತಂದೆಯೊಂದಿಗೆ ತಾಯಿಯೊಬ್ಬರನ್ನೆ ಬಿಟ್ಟು!!
ಪುಟಾಣಿ ಕಥೆ ೧೨
ಕಪ್ಪು ಬಿಳುಪಿನ ನಡುವೆ ಚರ್ಚೆ
ನಡೆಯುತ್ತಿತ್ತು.
ಕಪ್ಪು ಹೇಳಿತು "ನೋಡು ಈ ಜನರು
ಬ್ಯೂಟಿಪಾರ್ಲರ್ ಗೆ ಹೋಗಿ
ಬಿಳಿಯನ್ನು ಕಪ್ಪು ಮಾಡಿಕೊಂಡು ಹೇಗೆ
ಚಿಕ್ಕವರಾಗುತ್ತಿದ್ದಾರೆ"
"ಅದೆ
ಜನರು ಕಪ್ಪು ಚರ್ಮವನ್ನು ಬಿಳಿ
ಮಾಡುವುದರ ಬಗ್ಗೆ ಚಿಂತಿಸಿ ಇರೊ
ಕೂದಲನ್ನೆ ಕಳೆದು ಕೊಳ್ಳುತ್ತಿದ್ದಾರೆ" ನಗುತ್ತಾ ಹೇಳಿತು
ಬಿಳಿ!!
ಪುಟಾಣಿ ಕಥೆ ೧೩
ಸ್ಹೇಹಿತೆಯರೊಂದಿಗೆ
"ಮಹಿಳಾ ಸ್ವಾತಂತ್ರ್ಯದ" ಬಗ್ಗೆ ಮಾತನಾಡುತ್ತಿದ್ದಳು
ಅತ್ತೆ. "ಎಲ್ಲರಿಗೂ ಕಾಫಿ ಮಾಡಿ
ಕೊಡಲೇ ಅತ್ತೆ" ಅನುಮತಿ ಕೋರಿದಳು ಸೊಸೆ!!
ಪುಟಾಣಿ ಕಥೆ ೧೪
ಮಹನೀಯರೊಬ್ಬರು "ಜಾತಿನಿರ್ಮೂಲನೆಯ"
ಬಗ್ಗೆ ಭಾಷಣ ಮಾಡಿ ಮನೆಗೆ
ಬಂದರು. ರಿಜಿಸ್ಟರ್ ಮದುವೆ ಮಾಡಿಕೊಂಡು
ಮನೆಗೆ ಬಂದ ಮಗನನ್ನು ಕೇಳಿದರು,
"ಹುಡುಗಿ ನಮ್ಮವಳೇ??!!"
ಪುಟಾಣಿ ಕಥೆ ೧೫
ಮನೆಗೆಲಸ ಮಾಡಿ ಸುಸ್ತಾಗಿ ಫ್ಯಾನ್ ಕೆಳಗೆ
ಕಣ್ಮುಚ್ಚಿ ಕುಳಿತ್ತಿದ್ದ ಸೊಸೆಗೆ ,ಅತ್ತೆ ಚಹಾ
ತಂದು ಕೊಟ್ಟಾಗ ಅಚ್ಚರಿಗೊಂಡವಳಿಗೆ ಅತ್ತೆ
ಹೇಳಿದರು "ಸೊಸೆ ಮಗಳಾಗಬಹುದು, ಅತ್ತೆ
ಅಮ್ಮನಾಗಬಾರದೆ?"
ಪುಟಾಣಿ ಕಥೆ ೧೬
"ಚೆನ್ನಾಗಿ
ಓದಿ, ಉನ್ನತ ಹುದ್ದೆಗೆ ಸೇರು"
ಅಪ್ಪನ ಮಾತು.
"ಯಾಕಪ್ಪ
ನಾನು ನಿನ್ನಂತೆ, ಭೂತಾಯಿ ಸೇವೆ
ಮಾಡಬಾರದಾ?!" ಮಗನ ಪ್ರಶ್ನೆ
ಪುಟಾಣಿ ಕಥೆ ೧೭
ಮೊದಲನೆಯ ದಿನ ಕೆಲಸಕ್ಕೆ ಹೋಗಿ ಬಂದ
ಮಗನಿಗೆ ಜ್ಯೂಸ್ ಕೊಡುತ್ತ , "ಸುಸ್ತಾಯಿತಾ
ಮಗನೆ?" ಎಂದ ಅಮ್ಮನಿಗೆ ಮಗ
ನಗುತ್ತಾ ಹೇಳಿದ "ಬೆಳಿಗ್ಗೆಯಿಂದ ರಾತ್ರಿಯವರೆಗೂ ನೀ ಮಾಡುವ
ಕೆಲಸದ ಮುಂದೆ ಇದು ಏನೂ
ಇಲ್ಲ??!!"
ಪುಟಾಣಿ ಕಥೆ ೧೮
ಶಾಲೆಯಿಂದ
ತಡವಾಗಿ ಬಂದ ಮಗನಿಗೆ ಏಕೆ
ತಡವಾಯಿತೆಂದು ಆತಂಕದಿಂದ ಕೇಳಿದಳು ಅಮ್ಮ.
ನೀನೆ ಹೇಳಿದ್ದೆಯಲ್ಲಮ್ಮ "ಕಷ್ಟದಲ್ಲಿರುವವರಿಗೆ ಸಹಾಯ
ಮಾಡಬೇಕೆಂದು, ಅಜ್ಜಿಯೊಬ್ಬರನ್ನು ರಸ್ತೆ ದಾಟಿಸಿ ಬಂದೆನಮ್ಮ"
ಎಂದ ನಗುತ್ತ ಮಗ.
ಪುಟಾಣಿ ಕಥೆ ೧೯
ವಿದ್ಯಾರ್ಥಿನಿಯೊಬ್ಬಳು
ಶಿಕ್ಷಕಿಗೆ ಮುತ್ತಿನಸರವನ್ನು ಕಾಣಿಕೆಯಾಗಿ ಕೊಡಲು ಹೋದಳು. ಶಿಕ್ಷಕಿ ಅಚ್ಚರಿಯಿಂದ ಕಾರಣ ಕೇಳಿದಳು.
"ನೆನ್ನೆ
ನೀವೆ ಹೇಳಿದಿರಲ್ಲ 'ಮಾತೆ ಮುತ್ತು' ಎಂದು.
ನಿಮ್ಮ ಮಾತುಗಳು ಹಾಗೆ ಇವೆ
ಟೀಚರ್!!"
ಪುಟಾಣಿ ಕಥೆ ೨೦
"ಸ್ಹೇಹಿತರ
ದಿನ"ವನ್ನು ಆಚರಿಸಿದ ಗೆಳೆಯರಿಬ್ಬರು,
ಮನೆಗೆ ಹಿಂದಿರುಗುವಾಗ ಬಸ್ ಟಿಕೆಟ್ ತೆಗೆದುಕೊಳ್ಳುವ ವಿಷಯಕ್ಕಾಗಿ
ಜಗಳವಾಡಿಕೊಂಡು ಮಾತು ಬಿಟ್ಟರು!!
Comments
Post a Comment