ಕವನ - ಕಾಲ
ಕಾಲ ಬದಲಾಗದು ಎಂದೆಂದೂ
ಬದಲಾಗುತ್ತಿರುವೆವು ನಾವುಗಳಿಂದು
ಹಿಂದೆ ಮಾನವಶಕ್ತಿಯೇ ಎಲ್ಲ
ಈಗ ಯಂತ್ರಗಳಾಗಿವೆ ಅದೆಲ್ಲ
ಕಾಲ ಕೆಟ್ಟೋಗಿದೆ ಎನ್ನುವರೆಲ್ಲ
ಕೆಡುತ್ತಿರುವುದು ನಮ್ಮ ತನುಮನವೆಲ್ಲ
ಹಿಂದೆಯಿತ್ತು ಪ್ರೀತಿ ಸಹನೆ ತ್ಯಾಗ
ಈಗ ಬರೀ ದ್ವೇಷ ಸ್ವಾರ್ಥ ಲಾಭ
ಹಿಂದೆ ಇತ್ತು ಸ್ವಾಸ್ಥ್ಯ ಜೀವನ
ಈಗ ಒತ್ತಡದಿ ತುಂಬಿದೆ ಎಲ್ಲರ ಮನ
ಅದಕ್ಕೆಂದೆ ಹೇಳುತ್ತಿರುವರು ಹಿರಿಯರು
ನಮ್ಮ ಕಾಲವೇ ಸರಿ ಸರಿ
ನಿಜ, ಎಲ್ಲ ಬದಲಾಗುತ್ತಿರುವ ಈ ಪರಿ
ಮಾಡಲಾದೀತೆ ಅದ ರಿಪೇರಿ??
Comments
Post a Comment