Posts

Showing posts from 2018

ಕವನ - ಸ್ವಾತಂತ್ರ್ಯ ಗೀತೆ

Image
ದೇಶದೆಲ್ಲೆಡೆ ನಡೆಯಲು ಕ್ರಾಂತಿ ಸ್ವತಂತ್ರಗೊಂಡಳು ಭಾರತಿ  ಆದರೂ ಬದಲಾಗಲಿಲ್ಲ ಜನತೆಯ ಸ್ಥಿತಿ ಕಳಚಿತಾದರೂ ದಾಸ್ಯದ ಆ ಸಂಕೋಲೆ ನಡೆಯುತಿದೆ ಅವಿರತ ಅತ್ಯಾಚಾರ ಕೊಲೆ ಅಲೆಯುತ್ತಿದ್ದಾರೆ ಹಲವರು ಇಲ್ಲದೆ ನೆಲೆ ಬಂದಿತು ನವ ಪ್ರಜಾಪ್ರಭುತ್ವ ಸರ್ಕಾರ ಆದರಿಲ್ಲಿ ಪ್ರಜೆಗಳು ಅಗೋಚರ ಹುಸಿಯಾಯಿತು ಜನರ ಆಶೋತ್ತರ ಸ್ವಾತಂತ್ರ್ಯ ಬಂದು ಕಳೆಯಿತು ಹಲವು ಸಂವತ್ಸರ ಇದಕ್ಕಾಗಿ ಹರಿಸಿದರು ಹಲವರು ತಮ್ಮ ನೆತ್ತರ ಸ್ಮರಿಸೋಣ ಇಂದು ನಾವೆಲ್ಲರೂ ಅವರ ಸಾರೋಣ ಜಗಕೆ ಭವ್ಯ ಭಾರತದ ಹಿರಿಮೆಯ ಮರೆಯುತ ಎಲ್ಲರೂ ದ್ವೇ಼ಷ ಅಸೂಯೆಯ ಹಾರಿಸೋಣ ಎತ್ತರಕೆ ನಮ್ಮ ತ್ರಿವರ್ಣ ಪತಾಕೆಯ - ವಿಜಯಲಕ್ಷ್ಮಿ ಎಂ ಎಸ್       

ಕವನ - ಗೆಳೆತನ

Image
ಸ್ನೇಹ ಎರಡು ಮನಸುಗಳ ಸಂಗಮ ಇರುವುದಲ್ಲಿ  ನಿಷ್ಕಲ್ಮಶ‌ ಪ್ರೇಮ ಇದ್ದರೂ ಇಲ್ಲಿ ಕೋಪ‌ ಮುನಿಸು ಜಗಳ ಮಾಡುವುದದು ಮನಸ್ಸನ್ನು ಬಲು ಬೇಗ ನಿರಾಳ ಇದ್ದರೂ ಇಲ್ಲಿ ಭಾವನೆಗಳ ತಾಕಲಾಟ ಕಲಿಸುವುದದು ಬಾಳಲ್ಲಿ ಹಲವು ಪಾಠ ಇರಬೇಕು ಜೀವನದಲಿ ಇಂಥ ಗೆಳೆತನ  ತರುವುದದು ಮನಕ್ಕೆಂದಿಗೂ ನವ‌ಸಂಚಲನ  

ಪುಸ್ತಕ ಪರಿಚಯ - ಕಥಾಸಂಗ್ರಹ "ಎರಡು ಮನಸು"

Image
ತ್ರಿವೇಣಿ ಸೇರದ ದಾರಿ ಘಂಟೆ ಎರಡು ದಾಟಿದರೂ ಊಟ ಮಾಡದೆ ಗಂಡನ ದಾರಿ ಕಾಯುತ್ತಾ ಕುಳಿತ್ತಿದ್ದಳು ಕಮಲ. "ಅವರೇನು ಹೋಟೆಲಿನಲ್ಲಿ ತಿಂದಿರುತ್ತಾರೆ. ಮನೆಗೆ ಊಟಕ್ಕೆ ಬಂದರೆ ಬರುತ್ತಾರೆ ಇಲ್ಲದಿದ್ದರೆ ಇಲ್ಲ. ಅಪ್ಪ ಬದಲಾಗಿದ್ದಾರೆ. ಇಂತವರಿಗಾಗಿ ನೀನು ಊಟ ಮಾಡದೆ ಕಾಯುತ್ತಿರುವೆಯಾ?" ಮಗನ ಕೋಪದ ಮಾತುಗಳನ್ನು ಒಪ್ಪದ ಕಮಲ ಕಾಯುತ್ತಾ ಕುಳಿತಳು.  ಆತ ಬಂದವನೇ ಯಾವುದನ್ನು ಗಮನಿಸದೆ ತನ್ನಷ್ಟಕ್ಕೇ ತಾನೇ ಹೋಗಿ ಮಲಗಿದನು. ಎರಡು ವರ್ಷಗಳಿಂದಲೂ ಹೀಗೆ ಯಾವಾಗಲೋ ಮನೆಗೆ ಬರುವುದು. ಮನೆಗೆ ಬೇಕಾದ ಸಾಮಾನುಗಳನ್ನು ಸರಿಯಾಗಿ ತಂದು ಕೊಡುತ್ತಿರಲಿಲ್ಲ. ಗೆಳತಿಯರಿಂದ ಸಾಲ ಪಡೆದುಕೊಂಡು, ನಂತರ ಅವರ ನಡವಳಿಕೆಯಿಂದ ಕಮಲಳಿಗೆ ಒಮ್ಮೊಮ್ಮೆ ಬೇಸರವಾಗುತ್ತಿತ್ತು.  ಒಮ್ಮೆ ಬಾಲ್ಯದ ಗೆಳತಿ ಸಾವಿತ್ರಿ ಮನೆಗೆ ಬಂದು ಗಂಡನ ಬಗ್ಗೆ ಹೇಳಿದಳು. ಮೊದಲೇ ಅಲ್ಪ ಸ್ವಲ್ಪ ಮಾತು ಕಿವಿ ಮೇಲೆ ಬಿದ್ದರೂ ಕಮಲ ತಲೆ ಕೆಡಿಸಿಕೊಂಡಿರಲಿಲ್ಲ. ಗೆಳತಿಯ ಮಾತು ಕೇಳಿದಾಗಲೂ ಸಹ ನಂಬಲಿಲ್ಲ. ಆದರೆ ಗೆಳತಿಯ ಮನೆಗೆ ಹೋಗಿ ತಾನೇ ಗಂಡ ಬೇರೆ ಹುಡುಗಿ ಜೊತೆ ವಾಕಿಂಗ್ ಹೋಗುವುದನ್ನು ನೋಡಿದಳು. ಮನೆಗೆ ಬಂದು ಗಂಡನನ್ನು ಪ್ರಶ್ನಿಸಿದಳು.  "ನನ್ನ ಇಷ್ಟದ ಹಾಗೇ ನಡೆಯುವೆ, ಏಕೆಂದರೆ ನಾನು ದುಡಿಯುವವನು" ಎಂದನು.  "ಗಂಡ ನಡೆದ ಹಾದಿಯಲಿ ನಡೆಯಬೇಕಾದದ್ದು ಗೃಹಿಣಿ ಧರ್ಮ. ನಾನೂ ನಿಮ್ಮ ದಾರಿಯಲ್ಲಿ  ನಡೆಯುವೆ" ಎಂದ ಅವಳ ಮಾತಿಗೆ "ನನ್...

ವ್ಯಕ್ತಿ ಪರಿಚಯ - ಮರೆಯಲಾಗದ ಮಹಿಳೆಯರು

Image
   ಹಲವು ಮಹಿಳೆಯರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಎಲ್ಲರ ಮನದಲ್ಲು ಇಂದಿಗೂ ಜೀವಂತವಾಗಿ ಉಳಿದಿದ್ದಾರೆ. ಅವರಲ್ಲಿ ಒಂದಿಬ್ಬರ ಬಗ್ಗೆ ನಿಮಗೆ ಹೇಳಲಿಚ್ಛಿಸುತ್ತೇನೆ. 1910 ಆಗಸ್ಟ್ 26 ರಂದು ನಿಕೋಲೆ ಮತ್ತು ಡ್ರಾನ್ ಫಿಲೆ ದಂಪತಿಗಳ ಮಗಳಾಗಿ ಸ್ಕೋಪಿಯಲ್ಲಿ ತೆರೆಸಾರವರು ಜನಿಸಿದರು. ತಂದೆಯ ಸಮಾಜಸೇವೆ, ತಾಯಿಯ ಮೃದು  ಸ್ವಭಾವಗಳಿಂದ ಪ್ರಭಾವಗೊಂಡರು. ಹೆತ್ತವರು ಇವರಿಗಿಟ್ಟ ಹೆಸರು ಆಗ್ನೆಸ್ ಗೂಂಕ್ಸಾ. ಆಗ್ನೆಸ್ ಎಂದರೆ " ಪರಿಶುದ್ಧ" ಗೂಂಕ್ಸಾ ಎಂದರೆ "ಹೂವೊಗ್ಗು" ಎಂದರ್ಥ.    1928 ರಲ್ಲಿ ಆಗ್ನೆಸ್ "ಇನ್ಸ್‌ಟಿಟ್ಯೂಟ್ ಆಫ್ ದಿ ಬೆಸ್ಟ್ ವರ್ಜಿನ್ ಮೇರಿ" ಎಂಬ ಸಂಸ್ಥೆಗೆ ಸೇವಾವ್ರತಿಯಾಗಿ ಸೇರಿದರು. ಈ ಸಂಸ್ಥೆಯಲ್ಲಿ ಸೇರಿದ ವಿದ್ಯಾರ್ಥಿಗಳಿಗೆ ಸನ್ಯಾಸಿನಿದೀಕ್ಷೆಯನ್ನು ನೀಡಿ ತರಬೇತಿಯನ್ನು ಕೊಟ್ಟು  ಸೇವಾಕಾರ್ಯಕ್ಕಾಗಿ ಭಾರತಕ್ಕೆ ಕಳುಹಿಸಲಾಗುತ್ತಿತ್ತು. ಅದರಂತೆಯೇ 1929ರಲ್ಲಿ ಭಾರತಕ್ಕೆ ಕಾಲಿಟ್ಟ ಆಗ್ನೆಸ್ 1931ರಲ್ಲಿ ವೃತ್ತಿದೀಕ್ಷೆ ಮುಗಿಸಿದರು. ನಂತರ ಫ್ರೆಂಚ್ ಸಂತ ಮಹಿಳೆ ಲೇಡಿ ತೆರೆಸಾ ನೆನಪಿನಲ್ಲಿ ಸಿಸ್ಟರ್ ತೆರೆಸಾ ಎಂಬ ಅಭಿದಾನವನ್ನು ಆಗ್ನೆಸ್ ಗೆ ನೀಡಲಾಯಿತು. ನಂತರ ಕಲ್ಕತ್ತಾದಲ್ಲಿ ಶಿಕ್ಷಕಿಯಾಗಿ ತಮ್ಮ ಕಾರ್ಯವನ್ನು ಪ್ರಾರಂಭಿಸಿದ ತೆರೆಸಾ ಕಡುಬಡವರ,ದೀನ ದಲಿತರ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು. "ನಾನು ಅವರ ಹೊಟ್ಟೆ ಹಸಿವನ್ನು ಮಾತ್ರ ಕಂ...

ಪುಟಾಣಿ ಕಥೆ 1-10

ಪುಟಾಣಿ ಕಥೆ - ೧ ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಲು ನಿರ್ಧಾರ ಮಾಡಿ ಹೊರಟವನು , ದಾರಿಯಲ್ಲೊಬ್ಬನು , ಹೊಸದಾಗಿ ಕೊಂಡ " ಚಪ್ಪಲಿಗಳನ್ನು " ನೋಡಿ ಹಾಗೆ ನಿಂತ !! ಪುಟಾಣಿ ಕತೆ - ೨ ಆಗ ತಾನೆ ಜನಿಸಿದ ಹೆಣ್ಣುಮಗುವನ್ನು ಕಂಡು ಮುಖ ತಿರುಗಿಸಿದ ಅಪ್ಪನನ್ನು ಕಂಡ ಮಗು , " ಮಾಡದ ತಪ್ಪಿಗೆ ಶಿಕ್ಷೆಯೆ ?" ಎಂದು ಅಮ್ಮನೆಡೆಗೆ ನೋಡಿತು !! ಪುಟಾಣಿ   ಕಥೆ  -  ೩ ವೃದ್ಧಾಶ್ರಮಕ್ಕೆ ಅಪ್ಪನನ್ನು ಬಿಟ್ಟು ಬಂದ ಮಗನನ್ನು ಅವನ ಪುಟ್ಟ ಮಗ ಕೇಳಿದ " ನಾನು ದೊಡ್ಡವನಾಗುವುದು ಯಾವಾಗ ?" ಪುಟಾಣಿ   ಕಥೆ  -  ೪ ದೇವರಿಗೆಂದು ಬಗೆಬಗೆಯ ತಿನಿಸುಗಳನ್ನು ಮಾಡುತಿದ್ದ ಅಜ್ಜಿಯನ್ನು , ಅಲ್ಲಿಯೆ ಇದ್ದ ಮೊಮ್ಮಗು ಕೇಳಿತು " ಮಕ್ಕಳೆ ದೇವರಲ್ಲವೆ ಅಜ್ಜಿ ?" ಪುಟಾಣಿ   ಕಥೆ  -  ೫ ಜೀವನದ ಬೇಕು , ಬೇಡ ,  ಆಗು ಹೋಗುಗಳ   ಬಗ್ಗೆ ತಿಳಿಸುತಿದ್ದವಳಿಗೆ ನಗುತ್ತಾ ತಣ್ಣಗೆ ಹೇಳಿದಳು ಗೆಳತಿ " ನೀನೊಬ್ಬಳು ಜೊತೆಗಿದ್ದರೆ ಸಾಕು !" ಪುಟಾಣಿ   ಕಥೆ  -  ೬ ಮಗನ ತುಂಟತನವನ್ನ ತಡೆಯಲಾಗದ ಅಮ್ಮ ಮಗನನ್ನು ಬೈಯಲು , ಮಗ ನಗುತ್ತಾ  " ಅಜ್ಜಿ   ನಿನ್ನನ್ನು ಬೈಯ್ದಿದ್ದರಂತೆ " ಎಂದನು!! ಪುಟಾಣಿ   ಕಥೆ  -  ೭ ಕೈಲಾಗದು ಎಂ...

ವ್ಯಕ್ತಿ ಪರಿಚಯ - ಕಲ್ಯಾಣಮ್ಮ

Image
ಮೂಲತಃ ತಮಿಳಿನವರಾದ ಕಲ್ಯಾಣಮ್ಮನವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ.    ಇವರು ಸಾಹಿತ್ಯ ಸೇವೆಯೊಂದಿಗೆ ಸಮಾಜ ಸೇವೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಿದರು. ಮಧ್ಯಮ ವರ್ಗದ ಕುಟುಂಬದಲ್ಲಿ ರಾಮಸ್ವಾಮಿ    ಅಯ್ಯಂಗಾರ್    ಮತ್ತು ಜಾನಕಮ್ಮನವರ ಮಗಳಾಗಿ    ಕಲ್ಯಾಣಮ್ಮ  1892  ರಲ್ಲಿ ಜನಿಸಿದರು. ನಂತರ ಇವರನ್ನು    ಆರ್ಯ ಬಾಲಿಕಾ ಶಾಲೆಗೆ ಸೇರಿಸಿದರು. ಇವರು ಕಡಿಮೆ ಮಾತನಾಡುತ್ತಿದ್ದರೂ ಕಲಿಯುವುದರಲ್ಲಿ ಹೆಚ್ಚಿನ    ಆಸಕ್ತಿಯನ್ನು ತೋರುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಪುಸ್ತಕಗಳನ್ನು ಓದುವ ಹವ್ಯಾಸದೊಂದಿಗೆ ಪತ್ರಿಕೆಗಳಿಗೂ ಬರೆಯುತ್ತಿದ್ದರು. ಅಂದಿನ ಬಹು ದೊಡ್ಡ ಸಮಸ್ಯೆ ಎಂದರೆ    ಬಾಲ್ಯವಿವಾಹ ,  ಅದರಂತೆ ಇವರಿಗೂ ಸಹ ಆಡುವ ವಯಸ್ಸಿನಲ್ಲಿಯೇ ಅಂದರೆ   9  ವರ್ಷವಿದ್ದಾಗಲೇ ಮದುವೆಯಾಯಿತು.    ಇದರಿಂದ ವಿದ್ಯಾಭ್ಯಾಸವೂ ಕೊನೆಗೊಂಡಿತು. ಮದುವೆ ,  ಗಂಡ ಎಂದರೆ ಏನು ಎಂದು ತಿಳಿಯದ ಇವರು ಮದುವೆಯಾದ   45  ದಿನಗಳಲ್ಲೇ ವಿಧವೆಯಾದರು. ಅಂದಿನ ಸಂಪ್ರದಾಯಸ್ಥ ಸಮಾಜವು ಕಲ್ಯಾಣಿಯನ್ನು ವಿಧವೆಯೆಂದು ನಾಲ್ಕು ಗೋಡೆಗಳ ನಡುವೆ ಇರುವುದನ್ನು ತಪ್ಪಿಸಿದುದು ಅವರ    ಚಿಕ್ಕಪ್ಪ ಕೃಷ್ಣಯ್ಯಂಗಾರ್. ಪ್ರಾಧ್ಯಾಪಕರಾಗಿದ್ದ ...