ಕವನ - ಸ್ವಾತಂತ್ರ್ಯ ಗೀತೆ
ದೇಶದೆಲ್ಲೆಡೆ ನಡೆಯಲು ಕ್ರಾಂತಿ
ಸ್ವತಂತ್ರಗೊಂಡಳು ಭಾರತಿ
ಸ್ವತಂತ್ರಗೊಂಡಳು ಭಾರತಿ
ಆದರೂ ಬದಲಾಗಲಿಲ್ಲ ಜನತೆಯ ಸ್ಥಿತಿ
ಕಳಚಿತಾದರೂ ದಾಸ್ಯದ ಆ ಸಂಕೋಲೆ
ನಡೆಯುತಿದೆ ಅವಿರತ ಅತ್ಯಾಚಾರ ಕೊಲೆ
ಅಲೆಯುತ್ತಿದ್ದಾರೆ ಹಲವರು ಇಲ್ಲದೆ ನೆಲೆ
ಬಂದಿತು ನವ ಪ್ರಜಾಪ್ರಭುತ್ವ ಸರ್ಕಾರ
ಆದರಿಲ್ಲಿ ಪ್ರಜೆಗಳು ಅಗೋಚರ
ಹುಸಿಯಾಯಿತು ಜನರ ಆಶೋತ್ತರ
ಸ್ವಾತಂತ್ರ್ಯ ಬಂದು ಕಳೆಯಿತು ಹಲವು ಸಂವತ್ಸರ
ಇದಕ್ಕಾಗಿ ಹರಿಸಿದರು ಹಲವರು ತಮ್ಮ ನೆತ್ತರ
ಸ್ಮರಿಸೋಣ ಇಂದು ನಾವೆಲ್ಲರೂ ಅವರ
ಸಾರೋಣ ಜಗಕೆ ಭವ್ಯ ಭಾರತದ ಹಿರಿಮೆಯ
ಮರೆಯುತ ಎಲ್ಲರೂ ದ್ವೇ಼ಷ ಅಸೂಯೆಯ
ಹಾರಿಸೋಣ ಎತ್ತರಕೆ ನಮ್ಮ ತ್ರಿವರ್ಣ ಪತಾಕೆಯ
ಕಳಚಿತಾದರೂ ದಾಸ್ಯದ ಆ ಸಂಕೋಲೆ
ನಡೆಯುತಿದೆ ಅವಿರತ ಅತ್ಯಾಚಾರ ಕೊಲೆ
ಅಲೆಯುತ್ತಿದ್ದಾರೆ ಹಲವರು ಇಲ್ಲದೆ ನೆಲೆ
ಬಂದಿತು ನವ ಪ್ರಜಾಪ್ರಭುತ್ವ ಸರ್ಕಾರ
ಆದರಿಲ್ಲಿ ಪ್ರಜೆಗಳು ಅಗೋಚರ
ಹುಸಿಯಾಯಿತು ಜನರ ಆಶೋತ್ತರ
ಸ್ವಾತಂತ್ರ್ಯ ಬಂದು ಕಳೆಯಿತು ಹಲವು ಸಂವತ್ಸರ
ಇದಕ್ಕಾಗಿ ಹರಿಸಿದರು ಹಲವರು ತಮ್ಮ ನೆತ್ತರ
ಸ್ಮರಿಸೋಣ ಇಂದು ನಾವೆಲ್ಲರೂ ಅವರ
ಸಾರೋಣ ಜಗಕೆ ಭವ್ಯ ಭಾರತದ ಹಿರಿಮೆಯ
ಮರೆಯುತ ಎಲ್ಲರೂ ದ್ವೇ಼ಷ ಅಸೂಯೆಯ
ಹಾರಿಸೋಣ ಎತ್ತರಕೆ ನಮ್ಮ ತ್ರಿವರ್ಣ ಪತಾಕೆಯ
- ವಿಜಯಲಕ್ಷ್ಮಿ ಎಂ ಎಸ್

Comments
Post a Comment