ಚುಟಕಗಳು



ನಗುವೊಂದು ಸುಂದರ ಆಭರಣ
ದೊರಕದದು ಕೊಟ್ಟರು ಎಷ್ಟು ಹಣ
ಉತ್ತಮ ಆರೋಗ್ಯಕ್ಕೆ ಅದು ಒಂದು ಕಾರಣ
ಕಳೆದುಕೊಳ್ಳದಿರಿ ಅದನ್ನು ವಿನಾಕಾರಣ




ಪ್ರೀತಿಗೆಂದು ಕಟ್ಟಲಾಗದು ಬೆಲೆ
ಅದೆಂದಿಗೂ ಬತ್ತದ ಜೀವಸೆಲೆ
ಕಲಿಸುವುದಿಲ್ಲ ಅದನು ಯಾವ ಶಾಲೆ
ಇರುವುದದು ಎಂದೂ ಮನದಲ್ಲೆ



ಒಂದು ಹನಿ ಪ್ರೀತಿ ಸಾಕು
ನಡುವೆ ಸ್ನೇಹ ಬೆಳೆಯಲು.
ನಿರಂತರ ಹನಿಯೂ ಬೇಕು
ಸ್ನೇಹ ಸತತ ಬೆಳೆಯಲು




ಅಪ್ಪ ಅಮ್ಮ ಗುರು ಕಲಿಸುವರು
ಅರಿವಿನ ಪಾಠ
ಆದರೆ ಅನುಭವ ಕಲಿಸುವುದು
ಜೀವನಪಾಠ



ನೆನ್ನೆಯ ತಪ್ಪಿಗೆ ಹುಡುಕುತ ಉತ್ತರ
ಇಂದೇಕೆ ಆಗಬೇಕು ತತ್ತರ
ಇದ್ದರೆ ನಾಳೆಯ ಬಗ್ಗೆ ಎಚ್ಚರ
ಬೆಳೆಯಬಹುದು ಇನ್ನು ಎತ್ತರ

Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು