ಪುಟಾಣಿ ಕಥೆ 21-30
ಪುಟಾಣಿ ಕಥೆ - ೨೧
ತರಗತಿಯಲ್ಲಿ" ತರಲೆ ವಿದ್ಯಾರ್ಥಿಗಳು" ಎಂದೆ
ಹೆಸರಾಗಿದ್ದ ಎಲ್ಲರು ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ
ತೇರ್ಗಡೆಯಾದರು. ಮೇಷ್ಟ್ರು ಅವರನ್ನು "ಏನ್ರಪ್ಪ ಎಲ್ಲರು ಫಸ್ಟ್‌ಕ್ಲಾಸ್!!" ಎಂದಾಗ
, "ತರಲೆ ಮಾಡುವರೆಲ್ಲ ಓದಲ್ವಾ ಸರ್?" ಎಂದ ಅವರಲೊಬ್ಬ.
ಪುಟಾಣಿ ಕಥೆ - ೨೨
ಹುಷಾರಿಲ್ಲದ
ಅಕ್ಕನನ್ನು ನೋಡಿಕೊಳ್ಳುತ್ತಿದ್ದ ತಂಗಿಯನ್ನು ಕೇಳಿದಳು ಅಕ್ಕ "ಕಷ್ಟವಾಗುತ್ತಿದೆಯಲ್ಲವೆ?"
ಆಗ"
ನೀನು ಕಷ್ಟವೆಂದು " ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದರೆ
ನಾನೆಲ್ಲಿರುತ್ತಿದ್ದೆ?” ಎಂದುತ್ತರಿಸಿದಳು ತಂಗಿ.
ಪುಟಾಣಿ ಕಥೆ - ೨೩
ಸೊಸೆ ಯಾವಾಗಲೂ
ಮಗಳಿಗೆ " ಅತ್ತೆ
ಮನೆಗೆ ಹೋಗುವವಳು, ಸರಿಯಾಗಿ ಬುದ್ಧಿ ಕಲಿ"
ಎನ್ನುತ್ತಿದ್ದುದ್ದನ್ನು ಕೇಳುತ್ತಿದ್ದ ಅತ್ತೆ ಮಗನಿಗೂ
ಕಲಿಸು, ಅವನು ನನ್ನ ಮಗನಂತಾಗುವುದು
ಬೇಡವೇ!!"
ಪುಟಾಣಿ ಕಥೆ - ೨೪
ಆಶ್ರಮವೊಂದರಲ್ಲಿ ಗುರುಗಳು "ಹಣ,ಹೊನ್ನು ಎಲ್ಲಾ ಮಾಯೆ" ಎಂದು ಪ್ರವಚನ ನೀಡುತ್ತಿದ್ದರು. " ಕಾಣಿಕೆ ನೀಡಿದವರಿಗೆ ವಿಶೇಷ ಆಶೀರ್ವಾದ" ಎಂಬ
ಬೋರ್ಡ್
ಏಕೆ ಕೇಳಿದ ಭಕ್ತರಲೊಬ್ಬ.!!
ಪುಟಾಣಿ ಕಥೆ - ೨೫
ಕುಡಿದು ಮನೆಗೆ ಬಂದು ಜಗಳವಾಡುತ್ತಾ
"ದುಡಿದು ತಂದು ಹಾಕುವವ ನಾನು, ನಾ ಹೇಳಿದ ಹಾಗೆ ನಡೆಯಬೇಕು" ಎಂದು
ಮಡದಿಯ ಮೇಲೆ ಜೋರು ಮಾಡುತ್ತಿದ್ದ
ಅಪ್ಪನನ್ನು ಮಗಳು ಕೇಳಿದಳು, "ಅಮ್ಮ ಹೊರಗೆ, ಮನೆಯೊಳಗೆ ಎರಡೂ ಕಡೆ ದುಡಿಯುತ್ತಿದ್ದಾಳಲ್ಲವೆ!!"
ಪುಟಾಣಿ ಕಥೆ - ೨೬
ಕಾರ್ಯಕ್ರಮದ ಭಾಷಣವೊಂದರಲ್ಲಿ
"ಹೆಸರಿನಲ್ಲೇನಿದೆ, ಎಲೆ ಮರೆಯ ಕಾಯಿಯಂತಿರಬೇಕು" ಎನ್ನುತ್ತಿದ್ದವರು, ವಂದನಾರ್ಪಣೆಯಲ್ಲಿ ತಮ್ಮ ಹೆಸರನ್ನು ಹೇಳಲಿಲ್ಲವೆಂದು ಕೋಪಿಸಿಕೊಂಡರು!!
ಪುಟಾಣಿ ಕಥೆ - ೨೭
ಬೆಳಿಗ್ಗೆ ಎದ್ದು ಅಮ್ಮನ ಕಾಲಿಗೆ ನಮಸ್ಕರಿಸಲು ,ಮುದ್ದು ಮಗನನ್ನು ಕೇಳಿದಳು ಅಮ್ಮ" ಏಕೆ ಕಂದ?" ಎಂದು.ನೆನ್ನೆ ಶಾಲೆಯಲಿ ಹೇಳಿದರಮ್ಮ " ತಾಯಿಯೆ ದೇವರು" ಎಂದಿತು ಪುಟ್ಟ ಕಂದ!!
ಪುಟಾಣಿ ಕಥೆ - ೨೮
ತನ್ನನ್ನೆ ಹಿಂಬಾಲಿಸಿ ಬರುತ್ತಿದ್ದವನನ್ನು ನೋಡಿ ಕೋಪಗೊಂಡು ರೇಗಬೇಕು ಎನ್ನುವಷ್ಟರಲ್ಲಿ , ಅವನ ಕಣ್ಣೀರು ಕಂಡು ಅಚ್ಚರಿಗೊಂಡಳವಳು. "ಗತಿಸಿದ ನನ್ನ ಅಕ್ಕನನ್ನು ನಿಮ್ಮಲ್ಲಿ ಕಂಡೆ" ಎಂದು ಕಣ್ಣೊರೆಸಿಕೊಂಡನವನು.
ಪುಟಾಣಿ ಕಥೆ - ೨೯
ಮದುವೆಗೆ ಮೊದಲು ಅವಳನ್ನು "ನೀನೊಂದು ಮುದ್ದು ಗೊಂಬೆ" ಎನ್ನುತ್ತಿದ್ದ. ನಂತರ ತಿಳಿಯಿತು ಅವಳಿಗೆ ನಿಜವಾಗಿಯೂ ತಾನೊಂದು "ಷೋಕೇಸ್ ಗೊಂಬೆ"ಯೆಂದು!!"
ಪುಟಾಣಿ ಕಥೆ - ೩೦
"ಮಾತು ಬೆಳ್ಳಿ , ಮೌನ ಬಂಗಾರ" ಎಂಬಂತೆ ಕಡಿಮೆ ಮಾತನಾಡುತ್ತಿದ್ದಳು ಅವಳು. ಒಮ್ಮೆ" ಕಿವುಡು ಮತ್ತು ಮೂಗು ಮಕ್ಕಳ ಶಾಲೆ”ಗೆ ಹೋಗಿ ಮಕ್ಕಳನ್ನು ನೋಡಿದಾಗಲೆ ಅವಳಿಗೆ ತಿಳಿದದ್ದು ಮಾತು ಎಷ್ಟು ಮುಖ್ಯ ಎಂದು!!
Comments
Post a Comment