ಚುಟಕಗಳು - ಮಧುರ ಬಾಂಧವ್ಯ
೧
ನೀನೊಂದು
ಅಮೃತದ ಸಿಂಧು
ಇರಲಾರದು ಯಾವ ನಂಜಿನ ಬಿಂದು
ನೀನೆಂದು ಎಲ್ಲರಿಗೂ ಸ್ನೇಹಬಂಧು
ಇರಬೇಕು ಹೀಗೆ ನೀ ಎಂದೆಂದು
೨
ಬಯಸಿ ಗೆಳೆತನವ ನೀ ಬಂದೆ
ಅದ ಅರಿಯದೆ ನಾ ಹಾಗೆ ನಿಂದೆ
ಅದನು ಮೀರಿ ತೋರಿದೆ ನೀ ಪ್ರೀತಿ
ಎಂದೆಂದಿಗು ಇರಲಿ ಅದು ಇದೆ ರೀತಿ
೩
ಜೀವನವೆಂಬ ಸಾಗರದಲಿ
ನಾನಾಗಿದ್ದೆ ಒಂದು ಮೀನು
ಸ್ನೇಹವೆಂಬ ದೋಣಿಯಲಿ
ಬಂದು ಹಾಕಿದೆ ಗಾಳ ನೀನು
ಸಾಗರದಲ್ಲಿದ್ದ ಆ ಮೀನು
ಮನದಲ್ಲಿ ಬಂಧಿಯಾಯಿತೇನೊ
ಕಾಣದಂತಾಗಿದೆ ಮುಂದೇನು
ದಾರಿ ತೋರುವೆಯಾ ನೀನು?
೪
ಕೊಟ್ಟರೂ ಕೊಡದಂತಿರುವ ಪ್ರೀತಿಯ
ನೀನ್ಯಾಕೆ
ಮೆಚ್ಚಿದೆ?
ಜೊತೆಯಲ್ಲಿದ್ದರೂ ಇರದಂತಿರುವ ಗೆಳತನಕೆ
ನೀನ್ಯಾಕೆ ಮನಸೋತೆ?

Comments
Post a Comment