ಚುಟಕಗಳು - ಹಬ್ಬಗಳು
೧
ಭಾದ್ರಪದ ಮಾಸದಲಿ ಬರುವಳು ಸ್ವರ್ಣಗೌರಿ
ಮಹಿಳೆರಿಗಿದು
ಸಡಗರದ ತರಾತುರಿ
ಪುರುಷರ ಜೇಬಿಗೆ ಬೀಳುವುದು ಕತ್ತರಿ
ಮಕ್ಕಳಿಗೆ
ಸಿಗುವುದು ಸಿಹಿತಿನಿಸುಗಳು ತರಾವರಿ
೨
ಬಂದಿತು ನಾಡಹಬ್ಬ ದಸರ
ತಂದಿತು ಸಂತಸ ಸಡಗರ
ಜೋಡಿಸುತಿದ್ದ
ಬೊಂಬೆಗಳೆಷ್ಟು ಸುಂದರ
೩
ಸಡಗರದಿಂದ
ಮೆರೆಯುತಿದೆ ಮೈಸೂರು
ಕಣ್ಮನ ಸೆಳೆದಿದೆ ಅರಮನೆಯ ದರ್ಬಾರು
ನೋಡಲು ನೆರೆದಿಹರು ಜನ ಸಾವಿರಾರು
ಮರೆಯುವುದಿಲ್ಲ
ಆ ವೈಭವವ ಎಂದಿಗು
ಜನರು
೪
ರವಿ ತನ್ನ ಪಥ ಬದಲಾಯಿಸಿದ
ಮಕರ ಸಂಕ್ರಾಂತಿಯಂದು
ಎಳ್ಳು, ಬೆಲ್ಲ, ಕಬ್ಬು ತಿಂದು
ಒಳ್ಳೆ ಮಾತನ್ನಾಡಿ ಎಂದೆಂದು



Comments
Post a Comment