ಚುಟಕಗಳು - ಸ್ನೇಹ
೧.
ನೀ ಬಂದೆ ನನ್ನ ಬಳಿ
ತಂದೆ ಸ್ಹೇಹದ ತಂಗಾಳಿ
ನೀಡಿದೆ ನಗೆಯ ಬಳುವಳಿ
ಹೀಗೆ ಇರಲಿ ಸ್ಹೇಹದ ಸರಪಳಿ
೨.
ಎಲ್ಲಿಂದಲೊ
ನೀ ಬಂದೆ ಕೊಳ್ಳೇಗಾಲಕೆ
ಬಂದರೂ ಅಪರಿತ ಜಾಗಕೆ
ನಿಲ್ಲಿಸದೆ
ನಿನ್ನ ಚಟುವಟಿಕೆ
ಪ್ರಾರಂಭಿಸಿದೆ
ಈ ನಮ್ಮ ವೇದಿಕೆ
ಎಲ್ಲರ ಮನ ಸೆಳೆಯಿತು
ನಿನ್ನ ಚಟುವಟಿಕೆ
ಮನ ಸೋತಿತು ನಿನ್ನಯ ವಿಚಾರವಂತಿಕೆ
ಇದು ಹೀಗೆ ಮುಂದುವರಿಯಲಿ ಎಂಬುದು
ಎಲ್ಲರ ಬಯಕೆ
೩.
ಗೆಳತಿಯಾಗಿ
ನೀ ಬಂದೆ
ಮನಕೆ ಹರುಷವ ತಂದೆ
ನನ್ನ ಸ್ವಭಾವದಿಂದ ನೀ ನೊಂದೆ
ಆದರೂ ನಗುತಲಿರುವೆ ನನ್ನ ಮುಂದೆ
ಬದಲಾಗುವೆ
ನಾ ಇಂದೆ
೪.
ಗೆಳತಿಯಾಗಿ
ನೀ ಬಂದೆ ಅಂದು
ವಿನಯ, ಹೃದಯವಂತಿಕೆ ಇದೆಯಂದು
ಕಾಡುತಿಹುದಾ
ನಿನ್ನ ನನ್ನ ಮೌನವಿಂದು
ಚಿಂತಿಸುತಿರುವೆ
ಬದಲಾಗುವುದಿದು ಎಂದು?
೫
ಸ್ಹೇಹಕ್ಕಿಲ್ಲ
ವಯಸ್ಸಿನ ಮಿತಿ
ಸ್ಹೇಹಕ್ಕಿಲ್ಲ
ಎಲ್ಲೆ ಪರಿಮಿತಿ
ಸ್ಜೇಹ ತರುವುದು ಹಳೆಯ ಸ್ಮೃತಿ
ಸ್ನೇಹ ನಮ್ಮ ನಿಜ ಸಂಗಾತಿ

Comments
Post a Comment